ಬುಧವಾರ, ಅಕ್ಟೋಬರ್ 4, 2017

ಶುಗರ್ ಜಾಸ್ತಿ ಆದ್ರೆ ಯೋಚ್ನೆ ಬೇಡ ಸಿಂಪಲ್ ಮನೆ ಮದ್ದುಗಳಿದೆ!

ಶುಗರ್ ಜಾಸ್ತಿ ಆದ್ರೆ ಯೋಚ್ನೆ ಬೇಡ ಸಿಂಪಲ್ ಮನೆ ಮದ್ದುಗಳಿದೆ!

ನೆಲ್ಲಿಕಾಯಿ:

20 ಮಿಲೀ ನೆಲ್ಲಿಕಾಯಿ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಮಧುಮೇಹ ರೋಗಿಗಳಿಗೆ ಒಳ್ಳೆಯದು. 

ದಾಲ್ಚಿನ್ನಿ:

ಈ ಪ್ರಮುಖ ನೈಸರ್ಗಿಕ ಮನೆಯ ಮದ್ದುಗಳಲ್ಲಿ ಒಂದಾಗಿದೆ. ಮೊದಲು ಒಂದು ಲೀಟರ್ ನೀರು ತೆಗೆದುಕೊಂಡು 3-4 ದಾಲ್ಚಿನ್ನಿ ಸೇರಿಸಿ 20 ನಿಮಿಷಗಳ ಕಾಲ ಬಿಸಿ ಮಾಡಿ , ಕಾದ ಮೇಲೆ ಆರಿಸಿ ಪ್ರತಿ ದಿನ ಒಂದು ಗ್ಲಾಸ್ ಕುಡಿಯಬೇಕು.

ನೇರಳೆ :

ನೇರಳೆ ಹಣ್ಣಿನ 1 -2 ಬೀಜಗಳನ್ನು ಪುಡಿಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಬೇರೆಸಿ ಕುಡಿದರೆ ಒಳ್ಳೆಯದು ಹಾಗೆಯೇ ನೇರಳೆ ಗಿಡದ ಎಲೆಗಳು ಸಹ ಮಧುಮೇಹಕ್ಕೆ ಬಹಳ ಒಳ್ಳೆಯದು.

ಮೆಂತ್ಯ:

ಸಣ್ಣ ಲೋಟದಲ್ಲಿ 2 ಚಮಚ ಮೆಂತ್ಯೆಯನ್ನು ತೆಗೆದುಕೊಂಡು ರಾತ್ರಿ ಇಡೀ ನೆನೆಸಿ ಬೆಳಗ್ಗೆ ತಿನ್ನಬೇಕು ,ಮೂರು ತಿಂಗಳು ಈ ರೀತಿ ಮಾಡಿದರೆ ಒಳ್ಳೆಯದು.

ಲೋಳೆ ಸರ (ಅಲೋವೆರಾ ):

ಅರ್ಧ ಚಮಚ ಲೋಳೆ ಸರದ ರಸವನ್ನು ಮಧ್ಯಾಹ್ನ ಹಾಗು ರಾತ್ರಿ ಊಟಕ್ಕೆ ಮುಂಚೆ ತಿಂದರೆ ಒಳ್ಳೆಯದು.

ಹಾಗಲಕಾಯಿ :

3 -4 ಹಾಗಲಕಾಯಿ ಸಣ್ಣ ತುಂಡುಗಳನ್ನು ನೀರು ಸೇರಿಸಿ ರುಬ್ಬಿ ಬೆಳಗ್ಗೆ ತಿಂಡಿಗೆ ಮುಂಚೆ ಕುಡಿದರೆ ಬಹಳ ಒಳ್ಳೆಯದು ಹಾಗು ಇದು ಬಹಳ ಪರಿಣಾಮಕಾರಿ ಮದ್ದು.

ಆಲದ ಮರದ ತೊಗಟೆ :

20 ಗ್ರಾಂ ಆಲದ ಮರದ ತೊಗಟೆಯನ್ನು 4 ಗ್ಲಾಸ್ ನೀರಿನಲ್ಲಿ ಬೇರೆಸಿ ಕಾಯಿಸಿ ಆರಿಸಿ ದಿನವು 50 ಮಿ ಲಿ ಸೇವಿಸಬೇಕು.

ಅಮೃತ ಬಳ್ಳಿ :

ದಿನ ಒಂದು ಅಮೃತ ಬಳ್ಳಿ ಎಲೆಯನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಪಡವಲ ಕಾಯಿ :

ಪಡವಲ ಕಾಯಿಯು ಸಹ ಆರೋಗ್ಯಕ್ಕೆ ಒಳ್ಳೆಯದು.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook