ಬುಧವಾರ, ಅಕ್ಟೋಬರ್ 4, 2017

ಹೆಣ್ಣು ಮಕ್ಕಳ ಶಾಪ ತಟ್ಟದೇ ಇರೋಲ್ವಂತೆ!

ಹೆಣ್ಣು ಮಕ್ಕಳ ಶಾಪ ತಟ್ಟದೇ ಇರೋಲ್ವಂತೆ! ಇದಕ್ಕೆ ಕಾರಣವೇನು ?
ಸೀತೆಯ ಮಾನ ತೆಗೆಯಲು ಹೋದ ರಾವಣನ ಕಥೆ ಏನಾಯ್ತು ? ದ್ರೌಪದಿಯ ಮಾನವನ್ನು ಸಭೆಯಲ್ಲಿ ತೆಗೆದ ಕೌರವನ ಪಾಡೇನಾಯ್ತು ? ಭೀಷ್ಮ ಸಾಯುವುದಕ್ಕೂ ಮುಂಚೆ ಯುಧಿಷ್ಠಿರನಿಗೆ ಹೇಳಿದ ಮಾತುಗಳಿವು, ಕೊನೆಗೆ ಹೆಣ್ಣಿನ ರೂಪವೇ ಆದ ಶಿಖಂಡಿಯಿಂದ ಭೀಷ್ಮ ನ ಅಂತ್ಯವಾಯ್ತು.

ಹೆಣ್ಣಿನ ಕಣ್ಣೀರು ಶಾಪ ಗಂಡಿನ ಅಂತ್ಯ !

 
ಸಾಯುವ ಭೀಷ್ಮ ತನ್ನ ಸುತ್ತಲಿನ ಏಳು ಋಷಿಗಳು, ಕೃಷ್ಣ, ಯುಧಿಷ್ಠಿರ, ಪಾಂಡವರು ಮತ್ತು ದುರ್ಯೋಧನನನ್ನ ಕುರಿತು ಈ ರೀತಿ ಹೇಳುತ್ತಾಳೆ. ಹೆಣ್ಣು ಒಂದು ಪ್ರಜ್ವಲಿಸುವ ಸೂರ್ಯನಂತೆ ಅವಳು ತಂಪಾದ ಗಾಳಿಯಂತೆ ,ಆಕೆಯು ತ್ಯಾಗ ಜೀವಿ , ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿದವಳು . ಅವಳ ಮನಸು ನೋಯಿಸಿದರೆ ಅವಳಿಗೆ ಕಣ್ಣೀರು ತರಿಸಿದರೆ ಅವಳ ಶಾಪವೇ ಗಂಡಿನ ಅಂತ್ಯ.

ಹೆಣ್ಣಿಗೆ ಗೌರವ ಕೊಡದಿದ್ದರೆ ಗಂಡಿನ ಅಂತ್ಯ ಸುಲಭ ! 

 ಮನೆಯಲ್ಲಿನ ಸಂಪತ್ತು , ಹಣ , ಅದೃಷ್ಟ ಹೆಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ ಅವಳಿಗೆ ಮರ್ಯಾದೆ ಸಿಗದ ಜಾಗದಲ್ಲಿ ಇದಾವುದೂ ಉಳಿಯುವುದಿಲ್ಲ.

ಹೆಣ್ಣಿಗೆ ಪ್ರೀತಿ ವಾತ್ಸಲ್ಯಗಳನ್ನು ಕೊಟ್ಟರೆ ಸಾಕು ಅವಳು ಮನೆಯಲ್ಲಿ ಸಂತೋಷವನ್ನು ಉಕ್ಕಿಸುತ್ತಾಳೆ.

  ಹೆಣ್ಣಿನ ಮಾನ ತೆಗೆದವರಾರು ಉಳಿದಿಲ್ಲ !

ತನ್ನ ಸ್ವಂತ ನಾದಿನಿಯ ಸೀರೆಯನ್ನು ಸಭೆಯಲ್ಲಿ ಎಳೆದ ಕೌರವರ ಅಂತ್ಯ ಅತ್ಯಂತ ಭೀಕರವಾಗಿತ್ತು. ಪವಿತ್ರ ಸ್ತ್ರೀ ಸೀತೆಯನ್ನು ಅಪಹರಿಸಿದ ರಾವಣನ ಪಾಡು ಸಹ ಅತ್ಯಂತ ಘೋರವಾಗಿತ್ತು. ಮಹಾಭಾರತ ಯುದ್ಧವು ನಡೆದದ್ದು ಹೆಣ್ಣಿಂದಲೇ ಅಂದು ಫಲಿಸಿದ್ದು ದ್ರೌಪದಿಯ ಶಾಪ

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook