ಬುಧವಾರ, ಅಕ್ಟೋಬರ್ 4, 2017

ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ,ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯವೇನು ಗೊತ್ತಾ?


ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ ಹಾಗು ಇದರ ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯ ತಿಳಿದುಕೊಳ್ಳಿ.

ಸಿನಮೋಮಮ್ ಕ್ಯಾಂಫೋರ( CINNAMOMUM CAMPHORA)

ಎಂಬ ವೃಕ್ಷದ ತೊಗಟೆಯಿಂದ ಕರ್ಪೂರವನ್ನು ತಯಾರಿಸುತ್ತಾರೆ ಆದರೆ ಈಗ ಕರ್ಪೂರವನ್ನು ರಾಸಾಯನಿಕವಾಗಿ ಟರ್ಪಂಟೈನ್ ಎಣ್ಣೆಯಲ್ಲಿ ತಯಾರಿಸುತ್ತಾರೆ. ಇದನ್ನು ಹೆಚ್ಚಾಗಿ ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.


ಧಾರ್ಮಿಕ ಕಾರಣಗಳು :

ಬೂದಿ ಉಳಿಯದೆ ಸಂಪೂರ್ಣವಾಗಿ ಉರಿದು ಹೊಗೆಯಾಗುತ್ತದೆ ಆದುದರಿಂದ ದೇವರ ಪೂಜೆಯಲ್ಲಿ ಉಪಯೋಗಿಸುತ್ತಾರಂತೆ. ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುವ ಹಾಗೆಯೇ ದೇವರ ಎದುರು ನಿಂತಿರುವ ಭಕ್ತನ ಅಹಂಕಾರವೂ ಉರಿದು ಹೋಗಿ ಆತ್ಮ ಪರಿಶುದ್ಧವಾಗಲಿ ಎಂಬುದೇ ಇದರ ಅರ್ಥ. ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ನಮ್ಮಲ್ಲಿ ಸಾಧ್ಭಾವನೆ ಮೂಡಿಸುತ್ತದೆ.

ವೈಜ್ಞಾನಿಕ ಕಾರಣಗಳು :

ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತವೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ. ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ,ಬೆಚ್ಚಿ ಬೀಳುವಿಕೆ,ಹಿಸ್ಟೀರಿಯಾ,ಕೀಲುಗಳನೋವು ಮೊದಲಾದ ಖಾಯಿಲೆಗಳಿಂದ ಮುಕ್ತಿ ಹೊಂದಬಹುದು.

 
 ಕರ್ಪೂರ ಹೊಗೆ ವಾಸನೆಯಿಂದ ಅಪಸ್ಮಾರ, ಉನ್ಮಾದ ಮತ್ತು ಸಂಧಿವಾತ ಪೀಡಿತವಾಗಿರುವ ಜನರಿಗೆ ಬಹಳ ಲಾಭಕರವಾಗಿರುತ್ತದೆ. ಪೂಜೆಗೆ, ಚರ್ಮದ ರಕ್ಷಣೆಯಗೆ, ಕೊಠಡಿ ಸ್ವಚ್ಛಗೊಳಿಸಲು ಹೀಗೆ ಕರ್ಪೂರವನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಕರ್ಪೂರ ಪ್ರಬಲ ಪರಿಮಳ, ಚಿಕಿತ್ಸೆ ಗುಣಗಳನ್ನು ಹೊಂದಿದ್ದು ಸಕಾರಾತ್ಮಕತೆ ಹರಡಲು ಹೆಸರುವಾಸಿ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook