ಮಂಗಳವಾರ, ನವೆಂಬರ್ 21, 2017

ಈ ಪವಿತ್ರ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆಗೆ ಬರುವಳು!


ಲಕ್ಷ್ಮಿ ದೇವಿ ಪೂಜೆಯ ಸಮಯದಲ್ಲಿ ಕೆಲವು ಅಗತ್ಯ ವಸ್ತುಗಳನ್ನು ಇಡಬೇಕು. ಆಗ ದೇವಿಯ ಸಂತೃಪ್ತಳಾಗುವಳು. ಜೊತೆಗೆ ನಮ್ಮ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಹಾಗಾದರೆ ಆ ವಸ್ತುಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ವಿವರಣೆಗಳನ್ನು ಓದಿ...

ಈ ಪವಿತ್ರ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆಗೆ ಬರುವಳು:


ಲಕ್ಷ್ಮಿಯ ಆಕರ್ಷಣೆಗೆ
ಲಕ್ಷ್ಮಿ ದೇವಿ ಹಣದ ಅಧಿಪತಿಯಾಗಿದ್ದಾಳೆ. ಅವಳ ಸಂತೋಷಕ್ಕೆ ಕಾರಣವಾಗಬೇಕು. ಪೂಜೆಯನ್ನು ಸಲ್ಲಿಸುವಾಗ ಭಯ-ಭಕ್ತಿ ಭಾವ ತುಂಬಿರಬೇಕು. ಆಗಲೇ ತಾಯಿ ಒಳ್ಳೆಯದನ್ನು ಹರಸುತ್ತಾಳೆ. ಮನೆಯಲ್ಲೂ ಹಣದ ಹರಿವು ಹೆಚ್ಚಾಗುತ್ತದೆ ಎಂದು ಆಧ್ಯಾತ್ಮಿಕ ನಂಬಿಕೆಯನ್ನು ಹೊಂದಿದ್ದಾರೆ.

ಪ್ರಮುಖ ವಸ್ತುಗಳು ಅಗತ್ಯ
ತಾಂತ್ರಿಕ ಶಾಸ್ತ್ರದ ಪ್ರಕಾರ ಬಡತನ ಮತ್ತು ದಾರಿದ್ರ್ಯಗಳು ನಿವಾರಣೆಯಾಗಬೇಕಾದರೆ ಮನೆಯಲ್ಲಿ ಕೆಲವು ಪ್ರಮುಖ ವಸ್ತುಗಳನ್ನು ಇರಿಸಬೇಕು. ಜೊತೆಗೆ ದೇವಿಗೆ ಪ್ರಿಯವಾದ ಸಾಂಪ್ರದಾಯಿಕ ವಸ್ತುಗಳನ್ನಿಟ್ಟು ಪೂಜೆ ಸಲ್ಲಿಸಬೇಕು.

ಸಮೃದ್ಧಿಗೆ ದಾರಿ
ತಂತ್ರ ಶಾಸ್ತ್ರದ ಪ್ರಕಾರ ದೇವಿಗೆ ಪ್ರಿಯವಾದ ವಸ್ತುಗಳನ್ನು ಇಟ್ಟು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆ ಎದುರಾಗದು ಎಂದು ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರವೇ ನೀವು ಸರಿಯಾಗಿ ಪೂಜಿಸಿದಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾಗದು. ಬದಲಿಗೆ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುವುದು.

ಹಥಾ ಜೋಡಿ
ಯಾವುದಾದರೂ ಮಂಗಳವಾರ ಅಥವಾ ಶನಿವಾರ ಹಥಾ ಜೋಡಿಯನ್ನು ಮನೆಗೆ ತರಬೇಕು. ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಭದ್ರವಾಗಿ ತ್ರಿಜೂರಿ ಅಥವಾ ದೇವರ ಮನೆಯಲ್ಲಿ ಇಡಬೇಕು. ಪೂಜೆಯ ಸಮಯದಲ್ಲಿ ಆರಾಧಿಸಬೇಕು.

ಶ್ರೀ ಯಂತ್ರ
ಶ್ರೀ ಯಂತ್ರದಲ್ಲಿ 33 ದೇವತೆಗಳು ಮತ್ತು ಲಕ್ಷ್ಮಿಯ ಛಾಯಾಚಿತ್ರವಿರುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ಪೂಜೆ ಮಾಡಬೇಕು. ನಂತರ ಇದನ್ನು ಸೂಕ್ತ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಗೆ ಉತ್ತಮ ಅದೃಷ್ಟವು ಒದಗಿ ಬರುತ್ತದೆ.

ಮೋತಿ ಶಂಖ

ಪೂಜೆಯ ಸಮಯದಲ್ಲಿ ಮೋತಿ ಶಂಖ ಇರುವಂತೆ ನೋಡಿಕೊಳ್ಳಿ. ಪೂಜೆಯ ನಂತರ ಸುರಕ್ಷಿತ ಸ್ಥಳದಲ್ಲಿ ಇರಿಸಿ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಜೊತೆಗೆ ಮನೆಗೆ ಸಂಬಂಧಿಸಿದ ಹಣ ಹಾಗೂ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.

ಲಕ್ಷ್ಮಿ ಕೌರಿ
ಲಕ್ಷ್ಮಿ ಪೂಜೆಯ ಸಮಯದಲ್ಲಿ ಲಕ್ಷ್ಮಿ ಕೌರಿಯನ್ನು ಇಟ್ಟು ಪೂಜಿಸಬೇಕು. ಸಂಪತ್ತಿ ಸಂಕೇತವಾದ ಕೌರಿಯನ್ನು ಹಣವನ್ನು ಇಡುವ ಸ್ಥಳಗಳಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ಕೌರಿಯನ್ನು ಶುಕ್ರವಾರ ಮನೆಗೆ ತಂದು, ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ತ್ರಿಜೂರಿಯಲ್ಲಿ ಇಡಬೇಕು. ಇದರಿಂದ ಸಂಪತ್ತು ವೃದ್ಧಿಸುತ್ತದೆ.

ಗೋಮತಿ ಚಕ್ರ

ಗುಜರಾತನ ಧ್ವಾರಕದಲ್ಲಿ ಹರಿಯುವ ಗೋಮತಿ ನದಿಯಲ್ಲಿ ಗೋಮತಿ ಚಕ್ರ ದೊರೆಯುತ್ತದೆ. ಈ ಗೋಮತಿ ಚಕ್ರಕ್ಕೆ ಸುದರ್ಶನ ಚಕ್ರ ಎಂತಲೂ ಸಹ ಕರೆಯುತ್ತಾರೆ. ಇದು ಭಗವಂತ ಶ್ರೀಕೃಷ್ಣನ ಸುದರ್ಶ ಚಕ್ರವನ್ನು ಹೋಲುತ್ತದೆ ಎನ್ನಲಾಗುವುದು. 11 ಗೋಮತಿ ಚಕ್ರವನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತ ಸ್ಥಳದಲ್ಲಿಟ್ಟರೆ ಆರ್ಥಿಕವಾಗಿ ನೀವು ಸಭಲರಾಗುತ್ತೀರಿ ಎನ್ನಲಾಗುವುದು.

ಎಕ್ಕದ ಬೇರು
ಎಕ್ಕದ ಹೂವು ಹಾಗೂ ಬೇರು ಪವಿತ್ರವಾದ ವಸ್ತು ಎಂದು ಪರಿಗಣಿಸಲಾಗಿದೆ. ಶುಕ್ರವಾರದ ಶುಭ ಸಮಯದಲ್ಲಿ ಬಿಳಿ ಎಕ್ಕದ ಬೇರನ್ನು ಮನೆಗೆ ತಂದು ಪೂಜಾ ಸ್ಥಳ ಅಥವಾ ತ್ರಿಜೋರಿಯಲ್ಲಿಡಬೇಕು. ಇದು ಅತ್ಯಂತ ಶುಭದಾಯಕವಾದ ವಸ್ತು. ಇದರಿಂದ ಕುಟುಂಬಕ್ಕೆ ಶುಭವಾಗುವುದು.

ಒಂದು ಕಣ್ಣಿನ ತೆಂಗಿನಕಾಯಿ

ತಂತ್ರ ಶಾಸ್ತ್ರದ ಪ್ರಕಾರ ಒಂದು ಕಣ್ಣಿನ ತೆಂಗಿನಕಾಯಿ ಅತ್ಯಂತ ಪವಿತ್ರವಾದದ್ದು ಹಾಗೂ ಅಮೂಲ್ಯವಾದ ನಿಧಿ ಎಂದು ಹೇಳಲಾಗುತ್ತದೆ. ಇದನ್ನು ಪೂಜೆಯಲ್ಲಿ ಇಡುವುದು ಹಾಗೂ ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಸಂಪತ್ತು ಗಳಿಸಲು ಸಹಾಯವಾಗುವುದು.

ದಕ್ಷಿಣವರ್ತಿ ಶಂಖ
ಇದೊಂದು ಅಪರೂಪದ ಶಖದ ಚಿಪ್ಪು. ಇದು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದದ್ದು. ಇದನ್ನು ಲಕ್ಷ್ಮಿ ಹಾಗೂ ವಿಷ್ಣುವಿನ ಪ್ರತಿರೂಪ ಎಂತಲೂ ಕರೆಯುತ್ತಾರೆ. ಈ ದೇವತೆಗಳು ಇದನ್ನು ತಮ್ಮ ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಇದನ್ನು ಲಕ್ಷ್ಮಿ ಪೂಜೆಯಲ್ಲಿ ಇಟ್ಟು ಪೂಜಿಸಬೇಕು. ಅಲ್ಲದೆ ಶುಕ್ರವಾರ ಇದರಲ್ಲಿ ಹಾಲು ಮತ್ತು ಗಂಗಾ ನೀರನ್ನು ತುಂಬಿಸಿ ಮನೆಗೆ ಚಿಮುಕಿಸಿದರೆ ಹಣಕಾಸಿನ ಬಿಕ್ಕಟ್ಟು ಬರದು ಎಂದು ಹೇಳಲಾಗುತ್ತದೆ.

ಸಣ್ಣ ತೆಂಗಿನಕಾಯಿ

ಲಕ್ಷ್ಮಿ ದೇವಿಯ ಅತ್ಯಂತ ಪ್ರಿಯಕರವಾದ ವಸ್ತು ಸಣ್ಣ ತೆಂಗಿನಕಾಯಿ. ಇದನ್ನು ಪೂಜೆಯಲ್ಲಿ ಇಡುವುದು ಅಥವಾ ಕೆಂಪು ಬಟ್ಟೆಯಲ್ಲಿ ಸುತ್ತಿ ಸರುರಕ್ಷಿತ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಸದಾ ಸಂಪತ್ತು ನೆಲೆಸಿರುತ್ತದೆ.

ಕಮಲ್ ಗಟ್ಟಾ
ಕಮಲ್ ಗಟ್ಟಾವನ್ನು ಕಮಲದ ಬೀಜದಿಂದ ತಯಾರಿಸಲಾಗುತ್ತದೆ. ಕಮಲದ ಮೇಲೆ ಲಕ್ಷ್ಮಿ ದೇವಿ ಸದಾ ಕುಳಿತುರುತ್ತಾಳೆ. ಹಾಗೆಯೇ ಈ ಹೂವು ಬಹಳ ಮಂಗಳಕರವಾದ್ದದು. ಲಕ್ಷ್ಮಿ ದೇವಿಯ ಮಂತ್ರ ಹಾಗೂ ಜಪಕ್ಕೆ ಕಮಲ್ ಗಟ್ಟಾವನ್ನು ಬಳಸಿದರೆ ದೇವಿಯು ನಿಮಗೆ ಒಲಿಯುತ್ತಾಳೆ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.

English Summary:
At the time of Lakshmi Devi Puja there are some essential things. We believe that she will be happy and our wealth will grow.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook