ಮಂಗಳವಾರ, ನವೆಂಬರ್ 21, 2017

ಜಿಮ್ ಮಾಡಿದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ


ಜಿಮ್‍ಗಳಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ಮೈಕಟ್ಟಿನ ಆರೋಗ್ಯ ಸುಧಾರಣೆ ಆಗಬಹುದು. ಆದರೆ ಅಭ್ಯಾಸದ ನಂತರ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಇಲ್ಲವಾದರೆ ಗಂಟೆಗಟ್ಟಲೆ ಮಾಡಿದ ಪರಿಶ್ರಮ ಕ್ಷಣಾರ್ಧದಲ್ಲಿ ವಿಫಲವಾಗಿ ಹೋಗುತ್ತದೆ. ಜಿಮ್ ಮಾಡಿದ ನಂತರ ನಾವು ಯಾವೆಲ್ಲಾ ಕ್ರಮವನ್ನು ಕೈಗೊಳ್ಳಬೇಕು? ಯಾವ ಕೆಲಸಗಳನ್ನು ಮಾಡಬಾರದು? ಎನ್ನುವುದನ್ನು ತಿಳಿದುಕೊಂಡಿರಬೇಕು. ಹೌದು, ಅಂತಹ ವಿಚಾರಗಳ ಚಿಕ್ಕ ಪರಿಚಯವನ್ನು ಈ ಲೇಖನ ಮಾಡಿಕೊಡುತ್ತದೆ..

ಜಿಮ್ ಮಾಡಿದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ :

ಕೊಬ್ಬಿನ ಆಹಾರವನ್ನು ಸೇವಿಸಬೇಡಿ

ದೇಹವು ಜಿಮ್ ಮತ್ತು ವ್ಯಾಯಾಮದಿಂದ ದೇಹವು ದಣಿದಿರುವಾಗ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಾಡಿದ ಪರಿಶ್ರಮಕ್ಕೆ ಯಾವುದೇ ಫಲ ದೊರೆಯದು. ಆದಷ್ಟು ಗುಣಮಟ್ಟದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‍ಯುಕ್ತ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರವು ತ್ವರಿತವಾಗಿ ರಕ್ತವನ್ನು ಪ್ರವೇಶಿಸುತ್ತದೆ. ಕೊಬ್ಬಿನ ಆಹಾರ ಸೇವಿಸಿದರೆ ಅವು ಜೀರ್ಣಾಂಗ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.
ನೀರನ್ನು ಕುಡಿಯಬಾರದು

ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಕುಡಿಯುವುದು ಒಂದು ಅಭ್ಯಾಸ. ಆದರೆ ಈ ಅಭ್ಯಾಸ ಆರೋಗ್ಯ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ತಾಲೀಮು ಅಥವಾ ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರ ಹೊಮ್ಮಿದ ನೀರಿನಂಶವು ಪುನಃ ತಾನಾಗಿಯೇ ದೇಹದಲ್ಲಿ ಶೇಖರಣೆಗೊಳಗಾಗಬೇಕು. ತಕ್ಷಣಕ್ಕೆ ನೀರನ್ನು ಕುಡಿಯ ಬಾರದು.

ಅದೇ ಉಡುಗೆಯಲ್ಲಿ ಇರಬಾರದು
ಜಿಮ್ ಮತ್ತು ವ್ಯಾಯಾಮ ಮಾಡುವ ಸಮಯದಲ್ಲಿ ದೇಹದಿಂದ ಬಿಡುಗಡೆಯಾಗುವ ಬೆವರು ಬಟ್ಟೆಗೆ ಅಂಟಿಕೊಂಡಿರುತ್ತವೆ. ಜಿಮ್‍ನ ನಂತರ ನಾವು ಕಡ್ಡಾಯವಾಗಿ ಉಡುಗೆಯನ್ನು ಬದಲಿಸಬೇಕು. ಇಲ್ಲವಾದರೆ ಸೂಕ್ಷ್ಮಾಣುಗಳು ನಮ್ಮ ತ್ವಚೆಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಅಲ್ಲದೆ ದೇಹದ ವಾಸನೆಗೂ ಕಾರಣವಾಗುವುದು.

ತಣ್ಣಗಾಗಿಸುವುದನ್ನು ಮರೆಯದಿರಿ

ಜಿಮ್ ಮಾಡಿದ ನಂತರ ದೇಹ ದಣಿದು ಬಿಸಿಯಾಗಿರುತ್ತದೆ. ಅಂತಹ ಸಮಯದಲ್ಲಿ ದೇಹವನ್ನು ವಿಶ್ರಾಂತಿಗೊಳಪಡಿಸಿ, ತಂಪಾಗುವಂತೆ ಮಾಡಬೇಕು. ಈ ಕ್ರಿಯೆಯನ್ನು ಮರೆ ಮಾಚಬಾರದು. ಹೃದಯದ ಬಡಿತ ಸಾಮಾನ್ಯ ಸ್ಥಿರತೆಗೆ ತರಲು ಕೆಲವು ವಿಸ್ತರಣೆಗಳನ್ನು ಮಾಡುವುದರ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದು. ಇದು ನಿಮ್ಮ ಮುಂದಿನ ಕಾರ್ಯವನ್ನು ಸರಾಗವಾಗಿ ಮಾಡಲು ಅನುವುಮಾಡಿಕೊಡುತ್ತದೆ.

ಮುಖವನ್ನು ಮುಟ್ಟಬೇಡಿ

ಜಿಮ್ ಮಾಡುವಾಗ ಬಳಸಿದ ಸಲಕರಣೆಗಳನ್ನು ಅನೇಕ ಜನರು ಮುಟ್ಟಿರುತ್ತಾರೆ. ಅವರ ಬೆವರಿನಿಂದ ಅನೇಕ ಸೂಕ್ಷ್ಮಾಣುಗಳು ಅಂಟಿಕೊಂಡಿರುತ್ತವೆ. ಅದನ್ನು ಮುಟ್ಟಿದ ನಮ್ಮ ಕೈಗಳಿಗೂ ಅಂಟಿಕೊಂಡಿರುತ್ತವೆ. ಆ ಕೈಗಳಿಂದ ಮುಖವನ್ನು ಸ್ಪರ್ಶಿಸಿದಾಗ ರೋಗಾಣುಗಳು ನಮ್ಮ ತ್ವಚೆಗೆ ಅಂಟಿಕೊಳ್ಳುತ್ತವೆ. ಹಾಗಾಗಿ ಜಿಮ್ ನಂತರ ಮೊದಲು ಸ್ನಾನ ಅಥವಾ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.

English Summary:
Practicing an hour or more in gyms can improve health care. But after practice it is important to follow some appropriate steps. Otherwise, the exhaustion of the hours is going to fail soon.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook