ಮಂಗಳವಾರ, ನವೆಂಬರ್ 21, 2017

ತಾಮ್ರದ ಈ ಮಹತ್ವಗಳು ನೀವು ತಿಳಿದುಕೊಳ್ಳಲೇ ಬೇಕು

ತಾಮ್ರದ ಈ ಮಹತ್ವಗಳು ನೀವು ತಿಳಿದುಕೊಳ್ಳಲೇ ಬೇಕು
ಆರೋಗ್ಯ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ವಯಸ್ಕರಿಗೆ ಪ್ರತಿದಿನ ಒಂಭೈನೂರು ಮೈಕ್ರೋಗ್ರಾಂ ತಾಮ್ರದ ಅವಶ್ಯಕತೆ ಇದೆ. ನಮ್ಮ ಆರೋಗ್ಯದಲ್ಲಿ ತಾಮ್ರದ ಪಾತ್ರವೆಂದರೆ ಬ್ಯಾಕ್ಟ್ರೀರಿಯಾಗಳ ವಿರುದ್ದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಸುಸ್ಥಿತಿಯಲ್ಲಿಡುವುದು. ಅಲ್ಲದೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಈ ತಾಮ್ರವನ್ನು ಪಡೆಯಲು ತಾಮ್ರದ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದಕ್ಕಿಂತಲೂ ಉತ್ತಮ ಕ್ರಮವೆಂದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ದಿನಕ್ಕೆ ಎರಡು ಮೂರು ಲೋಟ ಕುಡಿಯುವುದು. ಉತಮ ಆರೋಗ್ಯಕ್ಕಾಗಿ ತಾಮ್ರದ ಮಹತ್ವವೇನು ಎಂಬುದನ್ನು ನೋಡೋಣ....

ತಾಮ್ರದ ಈ ಮಹತ್ವಗಳು ನೀವು ತಿಳಿದುಕೊಳ್ಳಲೇ ಬೇಕು:

ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ದೇಹದಲ್ಲಿರುವ ಕೊಬ್ಬನ್ನು ಬಳಸಿಕೊಳ್ಳಲು ತಾಮ್ರ ಮಹತ್ತರ ಪಾತ್ರ ವಹಿಸುತ್ತದೆ. ತನ್ಮೂಲಕ ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ. ಅಲ್ಲದೇ ವಿಶೇಷವಾಗಿ phosphodiesterase 3 (PDE3) ಎಂಬ ಕಿಣ್ವದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಈ ಕಿಣ್ವ ಕೊಬ್ಬನ್ನು ಕರಗಿಸಲು ತಡೆ ಒಡ್ಡುತ್ತದೆ. ಕೊಬ್ಬು ಕರಗುವ ಮೂಲಕ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ಅರೋಗ್ಯವೂ ವೃದ್ಧಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ತಾಮ್ರದ ಕೊರತೆಯಾದರೆ ಶಿಶುವಿನ ಮೆದುಳಿನ ಬೆಳವಣಿಗೆ ಬಾಧೆಗೊಳ್ಳುತ್ತದೆ. ಪರಿಣಾಮವಾಗಿ ಹಲವು ನರಸಂಬಂಧಿ ತೊಂದರೆಗಳೂ, ರೋಗ ನಿರೋಧಕ ವ್ಯವಸ್ಥೆ ಕುಂಠಿತವಾಗುವುದು ಮೊದಲಾದ ತೊಂದರೆಗಳು ಹುಟ್ಟುವ ಮಗುವನ್ನು ಕಾಡುತ್ತವೆ. ಏಕೆಂದರೆ ಮಗುವಿನ ಮೆದುಳಿನ ಹೊರಕವಚ ಅಥವಾ ಮೈಯೆಲಿನ್ ಪದರ (myelin sheath)ದ ಬೆಳವಣಿಗೆಗೆ ಫಾಸ್ಪೋಲಿಪಿಡ್ಸ್ (phospholipids) ಅಥವಾ ಮೇದಸ್ಸಿನ ಸಂಘಟನೆ ತುಂಬಾ ಅಗತ್ಯವಾಗಿದ್ದು ಈ ಕಾರ್ಯದಲ್ಲಿ ತಾಮ್ರ ಮಹತ್ತರ ಪಾತ್ರ ವಹಿಸುತ್ತದೆ. ತಾಮ್ರದ ಕೊರತೆಯಿಂದ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯದೇ ಹಲವು ತೊಂದರೆಗಳು ಎದುರಾಗುತ್ತವೆ.

ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್ಸುಗಳ ವಿರುದ್ಧ ಹೋರಾಡುತ್ತದೆ

ತಾಮ್ರದಲ್ಲಿ biocidal property ಅಥವಾ ಕ್ರಿಮಿಗಳನ್ನು ಕರಗಿಸಿಕೊಂಡು ನಿಷ್ಟೇಷ್ಟಿತಗೊಳಿಸುವ ಶಕ್ತಿಯಿದೆ. ಅಂದರೆ ಬ್ಯಾಕ್ಟೀರಿಯಾ, ವೈರಸ್ಸು, ಶಿಲೀಂದ್ರ್ಹ ಮೊದಲಾದವು ದೇಹವನ್ನು ಬಾಧಿಸಿದಾಗ ತಾಮ್ರದ ಕಣಗಳು ಈ ಕ್ರಿಮಿಗಳ ಯಾವುದೋ ಒಂದು ಭಾಗಕ್ಕೆ ಅಂಟಿಕೊಂಡು ಅಥವಾ ಮಿಳಿತಗೊಂಡು ಅವುಗಳು ನಿಶ್ಚಲವಾಗುವಂತೆ ಮಾಡುತ್ತವೆ. ಶಕ್ತಿಗುಂದಿದ ಈ ಕ್ರಿಮಿಗಳನ್ನು ನಮ್ಮ ರಕ್ತದ ಬಿಳಿಕಣಗಳು ಆವರಿಸಿ ಕೊಲ್ಲುತ್ತವೆ. ತನ್ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಸಬಲಗೊಳಿಸುತ್ತದೆ. ವಿಶೇಷವಾಗಿ ಆಸ್ಪತ್ರೆಯಿಂದ ಹೊರಬಂದಾಗ, ವಿಷಕಾರಿ ಆಹಾರವನ್ನು ಸೇವಿಸಿದ ಬಳಿಕ, ತೇವಗೊಂಡಿದ್ದ ನೆಲದಲ್ಲಿ ಓಡಾಡಿದ ಬಳಿಕ ಕಾಲುಬೆರಳುಗಳಲ್ಲಿ ಉಂಟಾದ ಸೋಂಕು ಗಾಯಗಳನ್ನು ಶೀಘ್ರವಾಗಿ ಗುಣಪಡಿಸಲು ತಾಮ್ರ ಅವಶ್ಯವಾಗಿದೆ.

ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ನಮ್ಮ ದೇಹದಲ್ಲಿರುವ ಕಬ್ಬಿಣವನ್ನು ಹೀರಿಕೊಳ್ಳಬೇಕಾದರೆ ತಾಮ್ರ ಬೇಕೇ ಬೇಕು. ತಾಮ್ರ ಇಲ್ಲದಿದ್ದರೆ ಕಬ್ಬಿಣ ಹೀರಲ್ಪಡದೇ ವಿಸರ್ಜನೆಗೊಳ್ಳುತ್ತದೆ. ಇದರಿಂದ ರಕ್ತಹೀನತೆ ಎದುರಾಗುತ್ತದೆ. ಅಲ್ಲದೇ ತಾಮ್ರ ಹೊಸ ರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣದ ಪ್ರಮಾಣ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ರಕ್ತಹೀನತೆಯ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳು.

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ದೇಹದಲ್ಲಿ ತಾಮ್ರದ ಕೊರತೆ ಇರುವವರಲ್ಲಿ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ಇದರ ಪರಿಣಾಮವಾಗಿ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯೂ ಹೆಚ್ಚುತ್ತದೆ. ವಿಶೇಷವಾಗಿ impaired oxidative defence ಅಥವಾ ರಕ್ತದಲ್ಲಿ ಬರುವ ವಿಷಕಾರಿ ವಸ್ತುಗಳನ್ನು ಅಥವಾ ಕಣಗಳನ್ನು ನಿಷ್ಪಲಗೊಳಿಸುವ ಕ್ಷಮತೆ ಕುಂಠಿತವಾಗುವ ಶಕ್ತಿ ಕಡಿಮೆಯಾಗುತ್ತದೆ. ತಾಮ್ರ ಒಂದು ಉತ್ತಮ ಆಂಟಿ ಆಕ್ಸಿಡೆಂಟು ಆಗಿದ್ದು ಇದು ರಕ್ತದಲ್ಲಿ prostaglandins ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಈ ಪೋಷಕಾಂಶ ವಿಶೇಷವಾಗಿ ನರಗಳಿಗೆ ಒಂದು ವೇಳೆ ಘಾಸಿಯಾಗಿದ್ದರೆ, ಉರಿಯೂತ ಎದುರಾಗಿದ್ದರೆ ಅದನ್ನು ಸರಿಪಡಿಸಲು ನೆರವಾಗುತ್ತದೆ. ಪರಿಣಾಮವಾಗಿ ಹೃಯದ ಸಂಬಂಧಿ ತೊಂದರೆಗಳ ಸಾಧ್ಯತೆ ಕಡಿಮೆಯಾಗುತ್ತದೆ.

English Summary:
According to information provided by healthcare, adults need an average of nine hundred micro-grams of copper daily. The role of copper in our health is to maintain the immune system against bacteria. And also helps to lose weight.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook