ಮಂಗಳವಾರ, ನವೆಂಬರ್ 21, 2017

ಜೇನಿಗಿಂತ ಅಮೃತ ಮತ್ತೊಂದಿಲ್ಲ


ಜೇನಿನ  ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ನುಗಳು, ಕೆಲವು ಕಿಣ್ವಗಳು, ಅಮೈನೋ ಆಮ್ಲ, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಉಪ್ಪು, ಮೆಗ್ನೇಶಿಯಂ, ಫಾಸ್ಫೇಟ್ ಹಾಗೂ ಪೊಟ್ಯಾಶಿಯಂ ಗಳು ಲಭಿಸುತ್ತವೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಕೆಲವಾರು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಬನ್ನಿ, ಇದರ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ....

ಜೇನಿಗಿಂತ ಅಮೃತ ಮತ್ತೊಂದಿಲ್ಲ

ಸ್ಥೂಲಕಾಯವನ್ನು ಕಡಿಮೆಗೊಳಿಸುತ್ತದೆ
ಬಿಳಿ ಸಕ್ಕರೆ ವಾಸ್ತವವಾಗಿ ಒಂದು ವಿಷ ಎಂದು ಪರಿಗಣಿಸಲ್ಪಡುತ್ತದೆ. ಜೇನು ಸಹಾ ಸಿಹಿವಸ್ತುವೇ ಆಗಿದ್ದರೂ ಇದರಲ್ಲಿ ಅಡಕಗೊಂಡಿರುವ ಸಿಹಿಕಾರಕಗಳು ಸಕ್ಕರೆಗಿಂತಲೂ ಭಿನ್ನವಾಗಿದ್ದು ಆರೋಗ್ಯಕ್ಕೆ ಪೂರಕವಾಗಿದೆ. ಈ ಸಕ್ಕರೆ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಸ್ಥೂಲಕಾಯವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಪ್ಪಟ ಜೇನಿನ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.

ಜೇನಿನಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಇದರ ಸೇವನೆಯಿಂದ ಕೊಲೆಸ್ಟಾಲ್ ಏರುವ ಸಂಭವ ಇಲ್ಲವೇ ಇಲ್ಲ. ಬದಲಿಗೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ನೆರವಾಗುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳನ್ನು ಕಿರಿದಾಗಿಸುವುದನ್ನು ತಡೆಗಟ್ಟುತ್ತದೆ. ರಕ್ತನಾಳಗಳು ಕಿರಿದಾಗುವ ಮೂಲಕ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ಕೆಲವಾರು ತೊಂದರೆಗಳು ಎದುರಾಗುತ್ತದೆ. ಅಧಿಕ ರಕ್ತದೊತ್ತಡ, ಸ್ಮರಣಶಕ್ತಿ ಕುಂದುವುದು, ತಲೆನೋವು ಮೊದಲಾದವು ಇದರ ಪರೋಕ್ಷ ಕೊಡುಗೆಗಳಾಗಿವೆ. ಪ್ರತಿದಿನವೂ ಒಂದು ಲೋಟ ನೀರಿನಲ್ಲಿ ಒಂದು ಅಥವಾ ಎರಡು ಚಿಕ್ಕಚಮಚ ಜೇನು ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು.

ಸ್ಮರಣಶಕ್ತಿ ಹೆಚ್ಚುತ್ತದೆ

ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಪ್ರತಿದಿನವೂ ಕೊಂಚ ಜೇನನ್ನು ಸೇವಿಸುವ ಮೂಲಕ ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಜೀವಕೋಶದ ಮಟ್ಟದಲ್ಲಿ ಆಂಟಿ ಆಕ್ಸಿಡೆಂಟುಗಳ ರಕ್ಷಣಾ ವ್ಯವಸ್ಥೆ ಉತ್ತಮಗೊಳ್ಳುವ ಮೂಲಕ ಸ್ಮರಣ ಶಕ್ತಿಯೂ ಹೆಚ್ಚುತ್ತದೆ.

ಗಾಢ ನಿದ್ದೆ ಆವರಿಸುತ್ತದೆ.

ಜೇನಿನಲ್ಲಿರುವ ಸಕ್ಕರೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಸೆರೋಟೋನಿನ್ ಎಂಬ ಕಣಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಸೆರೋಟೋನಿನ್ ಬಳಿಕ ಇದು ಮೆಲಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೆಲಟೋನಿನ್ ಗಾಢನಿದ್ದೆಗ ಅಗತ್ಯವಿರುವ ರಸದೂತವಾಗಿದೆ. ಪ್ರತಿದಿನವೂ ಜೇನನ್ನು ಕೊಂಚವಾಗಿ ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಆರೋಗ್ಯಕರ ಜೀರ್ಣಾಂಗಗಳು

ಜೇನಿನಲ್ಲಿರುವ ಪ್ರತಿಜೀವಕ ಗುಣ ಅತಿ ಪ್ರಬಲವಾಗಿರುವ ಕಾರಣದಿಂದ ಜೇನನ್ನು ಪ್ರತಿದಿನವೂ ಖಾಲಿಹೊಟ್ಟೆಯಲ್ಲಿ ಸೇವಿಸಲು ಸಲಹೆ ಮಾಡಲಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಇದರಿಂದ ಎದುರಾಗಬಹುದಾಗಿದ್ದ ಕೆಲವಾರು ತೊಂದರೆಗಳಿಂದ ರಕ್ಷಿಸುತ್ತದೆ.

ರಕ್ತನಾಳಗಳ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಜೇನಿನಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ನಿರಾಳಗೊಳಿಸುವ ಮೂಲಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಜೇನಿನಲ್ಲಿರುವ ಗ್ಲುಕೋಸ್ ನರವ್ಯವಸ್ಥೆಯ ಮೂಲವಾಗಿರುವ ನ್ಯೂರಾನ್ ಗಳ ಕೆಲಸದಲ್ಲಿ ಸಹಕರಿಸುವ ಮೂಲಕ ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಕಲೆರಹಿತ ತ್ವಚೆ

ನಿಸರ್ಗದಲ್ಲಿ ಲಭ್ಯವಿರುವ ಆಂಟಿ ಆಕ್ಸಿಡೆಂಟುಗಳಲ್ಲಿ ಜೇನು ಪ್ರಮುಖವಾಗಿದ್ದು ಇದರ ನಿತ್ಯದ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿದ್ದ ಹಲವಾರು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಆಶ್ರಯಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ತ್ವಚೆಯ ಆರೋಗ್ಯವನ್ನು ಹೆಚ್ಚಿಸಿ ಕಲೆರಹಿತವಾಗಲು ನೆರವಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ 

ಜೇನಿನಲ್ಲಿರುವ ಫ್ಲೇವನಾಯ್ಡುಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಇತರ ಪೋಷಕಾಂಶಗಳು ಕೆಲವಾರು ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಹೃದಯದ ಮೇಲಿನ ಒತ್ತಡ ನಿವಾರಿಸಿ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಪ್ರತಿದಿನವೂ ಜೇನನ್ನು ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕರುಳಿನ ಹುಣ್ಣುಗಳನ್ನು ಕಡಿಮೆಗೊಳಿಸುತ್ತದೆ

ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಜೇನಿನ ಸೇವನೆಯಿಂದ ಕರುಳುಗಳ ಹುಣ್ಣು ಹಾಗೂ ಕರುಳುಗಳ ಒಳಭಾಗದಲ್ಲಿ ಎದುರಾಗುವ ಬ್ಯಾಕ್ಟೀರಿಯಾಗಳ ಸೋಂಕು (bacterial gastroenteritis) ಮೊದಲಾದ ತೊಂದರೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕೆಂದರೆ ಪ್ರತಿದಿನವೂ ಮುಂಜಾನೆ ಪ್ರಥಮ ಆಹಾರವಾಗಿ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಅಗತ್ಯ.

ಗಾಯವನ್ನು ಒಣಗಿಸುತ್ತದೆ

ಜೇನು ಗಾಯವನ್ನು ಸ್ವಚ್ಛಗೊಳಿಸಿ ಅದರ ವಾಸನೆಯನ್ನು ಹಾಗು ಕೀವು ಕಟ್ಟುವುದನ್ನು ನಿಯಂತ್ರಿಸುತ್ತದೆ. ನೋವನ್ನು ಕಡಿಮೆಗೊಳಿಸಿ ಬೇಗ ಗಾಯ ಒಣಗಿ ವಾಸಿಯಾಗಲು ಸಹಾಯ ಮಾಡುತ್ತದೆ.

ತ್ವಚೆ ರಕ್ಷಣೆ ಮಾಡುತ್ತೆ

ಹಾನಿಯಾದ ತ್ವಚೆಯ ಆರೋಗ್ಯವನ್ನು ಗುಣಪಡಿಸಲು ಹಾಗು ತ್ವಚೆಯಲ್ಲಿ ಹೊಸ ಜೀವಕಣಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ತ್ವಚೆಯ ರೋಗ ಲಕ್ಷಣಗಳಾದ ಎಕ್ಜೀಮಾ, ಡರ್ಮಟೈಟಿಸ್ ಮತ್ತು ಇತರ ತೊಂದರೆಗಳನ್ನು ಗುಣಪಡಿಸಲು ಜೇನು ಸಹಾಯಮಾಡುತ್ತದೆ.

ಕ್ರೀಡಾಪಟುವಿನ ಪಾದ ಮತ್ತು ಜಾಕ್ ತುರಿಕೆ ತೊಡೆದುಕುತ್ತದೆ

ಜೇನು ಪ್ರಾಚೀನವಾದ ಆಂಟಿ ಫಂಗಲ್ ಗುಣ ಹೊಂದಿರುವುದರಿಂದ ಸೋಂಕು ಜಾಡ್ಯಗಳಾದ ಕ್ರೀಡಾಪಟುವಿನ ಪಾದ ಮತ್ತು ಜಾಕ್ ತುರಿಕೆ ಮುಂತಾದವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬೊಜ್ಜುಮೈ 
ಜೇನು ಬೊಜ್ಜು ಅಥವಾ ತೂಕ ಜಾಸ್ತಿ ಹೆಚ್ಚಾಗುವಿಕೆಯನ್ನು ಜೇನು ಅತ್ಯಂತ ಸಮರ್ಥವಾಗಿ ನಿಯಂತ್ರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣಕ್ರಿಯೆನ್ನು ವೃದ್ಧಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಹೆಚ್ಚಾದ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಮಕ್ಕಳ ಆರೋಗ್ಯಕ್ಕೆ

ಹಿರಿಯರು ಕಂಡುಕೊಂಡ ಪ್ರಕಾರ ಮಕ್ಕಳಿಗೆ ದಿನಕ್ಕೆ ಮೂರು ಬಾರಿ ಒಂದೊಂದು ಚಿಕ್ಕ ಚಮಚ ಜೇನು, ಹಾಗೂ ವಯಸ್ಕರಿಗೆ ದಿನಕ್ಕೆ ಮೂರು ಬಾರಿ ಒಂದೊಂದು ದೊಡ್ಡ ಚಮಚ ಜೇನು ತಿನ್ನಿಸುವುದು ಆರೋಗ್ಯಕ್ಕೆ ಉತ್ತಮ.

ಅಜೀರ್ಣದ ತೊಂದರೆಗೆ

ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಆರೋಗ್ಯಕ್ಕೆ ಪೂರಕ

ಕೊಂಚ ನೀರು ಮತ್ತು ಲಿಂಬೆರಸದಲ್ಲಿ ಚಿಕ್ಕ ಪ್ರಮಾಣದ (ಸುಮಾರು ಅರ್ಧ ಚಿಕ್ಕ ಚಮಚ) ಜೇನನ್ನು ನಿತ್ಯವೂ ಊಟದ ಜೊತೆಯಲ್ಲಿ ನೀರಿನ ಬದಲಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಕೆಲವರು ಊಟದೊಂದಿಗೆ ವೈನ್ ಸೇವಿಸುತ್ತಾರೆ. ಆರೋಗ್ಯಕ್ಕೆ ಮಾರಕವಾದ ಈ ಅಭ್ಯಾಸವನ್ನು ತೊಡೆಯಲು ಜೇನು, ಲಿಂಬೆರಸ ಸೇರಿಸಿದ ಪೇಯ ನೆರವಿಗೆ ಬರುತ್ತದೆ.

ಜೇನು ತುಪ್ಪದ ಶಾಂಪೂ

ನೀರು ಮತ್ತು ಜೇನು ತುಪ್ಪದಿಂದ ಮಾಡಿದ ಶಾಂಪೂ ತನ್ನಲ್ಲಿರುವ ಸ್ವಾಭಾವಿಕ ತೈಲಗಳ ದೆಸೆಯಿಂದ ನಿಮ್ಮ ಕೂದಲನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಅಲ್ಲದೆ ಕೂದಲು ಸಿಕ್ಕಾಗದಂತೆ ಮತ್ತು ತಲೆ ಹೊಟ್ಟು ಬರದಂತೆ ಕಾಪಾಡಿ, ನಿಮ್ಮ ಕೂದಲನ್ನು ಮೃದುವಾಗಿ, ರೇಷ್ಮೆಯಂತೆ ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಇದನ್ನು ಕೇಳಿದರೆ ನಿಮಗೆ ಈ ಶಾಂಪೂವಿನ ಮೇಲೆ ಅಕ್ಕರೆ ಬರುವುದಿಲ್ಲವೇನು?
English Summary:
This Article Briefly explains the significance of Honey in accordance with health in all aspects.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook